fbpx

ಸ್ವರ್ಣಪ್ರಾಶನ ಎಂದರೇನು? ಮಕ್ಕಳು ಆರೋಗ್ಯವಂತರಾಗಿರಲು ಸ್ವರ್ಣಪ್ರಾಶನ ಹೇಗೆ ಸಹಕಾರಿ?

ನಿಮ್ಮ ಮಕ್ಕಳು ಪದೇಪದೇ ಅನಾರೋಗ್ಯದಿಂದ ಬಳಲುತ್ತಿದ್ದಾರಾ? ಆರೋಗ್ಯಕ್ಕೆ ಸಂಬಂದಿಸಿದ ತೊಂದರೆಗಳಿಂದ ಶಾಲೆಗೆ ಗೈರಾಗುತ್ತಿದ್ದಾರಾ? ಹಾಗಿದ್ದರೆ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಉತ್ತಮ ಆರೋಗ್ಯಕ್ಕಾಗಿ ಸುವರ್ಣ ಪ್ರಾಶನವನ್ನು ನೀಡಿ. ಇದನ್ನು ಸ್ವರ್ಣ ಪ್ರಾಶನ, ಸ್ವರ್ಣ ಬಿಂದು ಪ್ರಾಶನ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.   

ಸ್ವರ್ಣಪ್ರಾಶನವು ಆಯುರ್ವೇದದಲ್ಲಿ ವಿವರಿಸಲಾದ 16 ಸಂಸ್ಕಾರಗಳಲ್ಲಿ ಒಂದಾಗಿದೆ. ಇದು ಮಕ್ಕಳ ಸರ್ವತೋಮುಖದ ಅಭಿವೃದ್ಧಿಯಲ್ಲಿ ಸಹಾಯಮಾಡುತ್ತದೆ. ಇಲ್ಲಿ ಸ್ವರ್ಣವೆಂದರೆ ಚಿನ್ನ ಮತ್ತು ಪ್ರಾಶನವೆಂದರೆ  ಸೇವಿಸುವಿಕೆ. ಇಲ್ಲಿ ಚಿನ್ನವನ್ನು ಇತರೆ ಔಷಧ ದ್ರವ್ಯಗಳೊಂದಿಗೆ  ಸೇವನೆಯೋಗ್ಯ ರೂಪದಲ್ಲಿ ತಯಾರಿಸಿ ಒಂದು ನಿರ್ದಿಷ್ಟ ದಿವಸದಂದು ಅಥವಾ ನಿತ್ಯವೂ ಸೇವಿಸುವುದರ ಮೂಲಕ ಮಕ್ಕಳ ದೈಹಿಕ ಹಾಗು ಮಾನಸಿಕ ಆರೋಗ್ಯವನ್ನು ಉತ್ತಮ ಗೊಳಿಸುವುದಾಗಿದೆ.

ಆಯುರ್ವೇದ  ಚಿಕಿತ್ಸೆಯ ಒಂದು ಪ್ರಮುಖ ಉದ್ದೇಶ ಆರೋಗ್ಯವಂತನ ಆರೋಗ್ಯವನ್ನು ಕಾಪಾಡಿಕೊಳ್ಳುವುದು. ಇದರ ಒಂದು ಭಾಗವಾಗಿ ಮಕ್ಕಳ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಸ್ವರ್ಣಪ್ರಾಶನ ಎಂಬ ಚಿಕಿತ್ಸೆಯನ್ನು ವಿವರಿಸಿದ್ದಾರೆ. ಸ್ವರ್ಣ ಪ್ರಾಶನವನ್ನು ಎಲ್ಲಾ ಮಕ್ಕಳಿಗೂ ನೀಡಬಹುದು. ಇದು ಮಕ್ಕಳ ರೋಗನಿರೋಧಕ ಶಕ್ತಿ, ಜ್ಞಾಪಕ ಶಕ್ತಿ, ಗ್ರಹಣ ಶಕ್ತಿ, ದೇಹದ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ಸ್ವರ್ಣಪ್ರಾಶದ ಮುಖ್ಯ ಘಟಕಗಳು 

 • ಶೋಧಿಸಿದ ಚಿನ್ನ ಅಥವಾ ಚಿನ್ನದ ಭಸ್ಮ 
 • ಬಜೆ 
 • ಬ್ರಾಹ್ಮೀ 
 • ಶಂಖಪುಷ್ಪ 
 • ಒಂದೆಲಗ 
 • ಯಷ್ಟಿಮಧು 
 • ಅಮೃತಬಳ್ಳಿ 
 • ಜೇನು 
 • ಹಸುವಿನ ತುಪ್ಪ 

ಸ್ವರ್ಣ ಪ್ರಾಶನದ ಪ್ರಯೋಜನಗಳು  

ಸುವರ್ಣಪ್ರಶಾನ ಹಿ ಏತತ್ ಮೇಧಾಗ್ನಿಬಲವರ್ಧನಮ್।
ಆಯುಷ್ಯಂ ಮಂಗಳಂ ಪುಣ್ಯಂ ವೃಷ್ಯಂ ಗ್ರಹಾಪಹಂ।।
ಮಾಸಾತ್ ಪರಮಮೇಧಾವೀ  ವ್ಯಾಧಿರ್ಭಿರ್ನ್ನ್ ಚ ದೃಶ್ಯತೇ।
ಷಡ್ಭಿರ್ಮಾಸೈ ಶ್ರುತಧಾರಾ ಸುವರ್ಣಪಾನಾತ್ ಭವೇತ್।।                        

(ಸೂತ್ರಸ್ಥಾನ – ಕಶ್ಯಪ ಸಂಹಿತಾ)

ಆಯುರ್ವೇದದ ಕಾಶ್ಯಪ ಸಂಹಿತೆಯ ಪ್ರಕಾರ ಮಕ್ಕಳಿಗೆ ಸ್ವರ್ಣಪ್ರಾಶನವನ್ನು ನೀಡುವುದರಿಂದ ಈ ಕೆಳಗಿನ ಪ್ರಯೋಜನಗಳನ್ನು ಹೊಂದಬಹುದು 

 1. ಮೇಧಾಶಕ್ತಿಯನ್ನು ಹೆಚ್ಚಿಸುತ್ತದೆ. 
 2. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. 
 3. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 
 4. ದೇಹದ ಬಲವನ್ನು ಹೆಚ್ಚಿಸುತ್ತದೆ. 
 5. ಆಯಸ್ಸನ್ನು ಹೆಚ್ಚಿಸುತ್ತದೆ. 
 6. ದೇಹಕ್ಕೆ ಮಂಗಳವನ್ನುಂಟುಮಾಡುತ್ತದೆ. 
 7. ದೇಹಕ್ಕೆ ಪುಣ್ಯಕರ ಅಥವಾ ಒಳಿತನ್ನುಂಟುಮಾಡುತ್ತದೆ.  
 8. ವೀರ್ಯವಂತರನ್ನಾಗಿಸುತ್ತದೆ. 
 9. ಮಕ್ಕಳ ಗ್ರಹ ದೋಷವನ್ನು ನಿವಾರಿಸುತ್ತದೆ. 
 10. ಒಂದು ಮಾಸದವರೆಗೆ ಸ್ವರ್ಣಪ್ರಾಶನವನ್ನು ನೀಡಿದ್ದಲ್ಲಿ ಮಕ್ಕಳು ಪರಮ ಮೇಧಾವಿಗಳಾಗುತ್ತಾರೆ, ಮತ್ತು 
 11. ನಿರಂತರ ಆರು ತಿಂಗಳವರೆಗೆ ಸೇವಿಸಿದಲ್ಲಿ ಕೇಳಿದ್ದನ್ನೆಲ್ಲ ನೆನಪಿನಲ್ಲಿಟ್ಟುಕೊಳ್ಳುವ ಶಕ್ತಿಯನ್ನು ಹೊಂದುತ್ತಾರೆ.

ಸ್ವರ್ಣ ಪ್ರಾಶನವನ್ನು ಎಲ್ಲಿ ಪಡೆಯಬಹುದು?

ಸ್ವರ್ಣಪ್ರಾಶನವನ್ನು ಪ್ರತಿ ಪುಷ್ಯ ನಕ್ಷತ್ರದ ದಿನದಂದು ಆಯುರ್ವೇದ ವೈದ್ಯರು ನೀಡುತ್ತಾರೆ. ಇದಲ್ಲದೆ ನಿತ್ಯ ಸೇವನೆಯ ಸ್ವರ್ಣ ಪ್ರಾಶನವನ್ನು ಯಾವುದೇ ಆಯುರ್ವೇದ ವೈದ್ಯರಲ್ಲಿ ಕೇಳಿ ಪಡೆಯಬಹುದು.

ಸ್ವರ್ಣಪ್ರಾಶನವನ್ನು ಪುಷ್ಯ ನಕ್ಷತ್ರದ ದಿನದಂದೇ ಏಕೆ ನೀಡುತ್ತಾರೆ ?

ಪುಷ್ಯ ಎಂದರೆ ಸಂರಕ್ಷಿಸುವುದು, ಪೋಷಿಸುವುದು ಮತ್ತು ಬಲಪಡಿಸುವುದು ಮತ್ತು ಅದೃಷ್ಟವನ್ನು ತರುವುದು ಎಂದರ್ಥ. ಪುಷ್ಯ ನಕ್ಷತ್ರವು ನಮ್ಮ ಒಳ್ಳೆಯ ಕಾರ್ಯಗಳು ಮತ್ತು ಪ್ರಯತ್ನಗಳ ಫಲಿತಾಂಶವನ್ನು ಹೆಚ್ಚಿಸುತ್ತದೆ. ಪುಷ್ಯ ನಕ್ಷತ್ರವು ಬಹಳ ಆಶಾದಾಯಕವಾಗಿದೆ. ಇದು ಹೆಚ್ಚು ಫಲಪ್ರದವಾಗಿದೆ ಮತ್ತು ಪುಷ್ಯ ನಕ್ಷತ್ರದ ಸಮಯದಲ್ಲಿ ಯಾವುದೇ ಕೆಲಸವನ್ನು ಕೈಗೊಳ್ಳಬಹುದು. ಪುಷ್ಯ ನಕ್ಷತ್ರವು ಸಮಯದ ಅವಧಿಯಲ್ಲಿ ಕೈಗೊಳ್ಳುವ ಯಾವುದಕ್ಕೂ ಉತ್ತಮ ಫಲಿತಾಂಶಗಳನ್ನು ಖಾತರಿಪಡಿಸುತ್ತದೆ ಎಂದು ಹೇಳಬಹುದು. ಪುಷ್ಯ ನಕ್ಷತ್ರವನ್ನು ಎಲ್ಲಾ ನಕ್ಷತ್ರಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ, ಹಾಗಾಗಿ ಸ್ವರ್ಣ ಪ್ರಾಶನವನ್ನು ಪುಷ್ಯ ನಕ್ಷತ್ರದ ದಿನದಂದು ನೀಡುತ್ತಾರೆ. ಆದರೆ ನಿತ್ಯ ಸೇವನೆಯ ಸ್ವರ್ಣಪ್ರಾಶನವನ್ನು ದಿನನಿತ್ಯವೂ ನೀಡಬಹುದು.

ಸ್ವರ್ಣಪ್ರಾಶನವನ್ನು ಯಾರಿಗೆ ನೀಡಬಹುದು?

ಸ್ವರ್ಣಪ್ರಾಶನವನ್ನು ನವಜಾತ ಶಿಶುವಿನಿಂದ ಹಿಡಿದು ೧೬ನೇ ವಯಸ್ಸಿನವರೆಗೆ ನೀಡಬಹುದು.

ಮೊದಲೆಲ್ಲಾ ಸ್ವರ್ಣಪ್ರಾಶನ ಪಡೆಯಲು ಪ್ರತಿ ಪುಷ್ಯ ನಕ್ಷತ್ರದ ದಿನದಂದು ಆಯುರ್ವೇದ ವೈದ್ಯರ ಬಳಿಗೆ ತೆರಳಿ ಹಾಕಿಕೊಳ್ಳುವ ಅನಿವಾರ್ಯವಿತ್ತು ಹಾಗೂ ಇದು ಇಂದಿಗೂ ಒಂದು ಉತ್ತಮ ವಿಧಾನವಾಗಿದೆ. ಮಕ್ಕಳ ಯಾವುದೇ ಆರೋಗ್ಯಸಂಬಧಿಸಿದ ತೊಂದರೆಗಳಿಗೆ ವೈದ್ಯಕೀಯ ತಪಾಸಣೆ ಹಾಗು ಸಲಹೆಗಳನ್ನು ನೀವು ಆಯುರ್ವೇದ ವೈದ್ಯರ ಮುಖಾಂತರ ಸ್ವರ್ಣ ಪ್ರಾಶನದ ಭೇಟಿಯ ದಿನದಂದು ಪಡೆಯಬಹುದು.

ಇತ್ತೀಚೆಗೆ ಸ್ವರ್ಣಪ್ರಾಶನವು ಕ್ಯಾಪ್ಸುಲ್ ರೂಪದಲ್ಲೂ ದೊರಕುತ್ತಿದ್ದು ಪೋಷಕರು ಇದನ್ನು ಮನೆಯಲ್ಲಿಯೇ ನೀಡಲು ಅನುಕೂಲಕರವಾಗಿದೆ. ಇದು ಪೋಷಕರ ಆಯುರ್ವೇದ ವೈದ್ಯರ ಭೇಟಿಗಾಗಿ ಸಮಯ ಹೊಂದಾಣಿಕೆ ಸಾಧ್ಯವಾಗದಿದ್ದಲ್ಲಿ, ಪುಷ್ಯ ನಕ್ಷತ್ರದ ದಿನದಂದು ಪ್ರಯಾಣಿಸುವವರಿಗೆ, ಅಥವಾ ಸಮಯದ ಅಭಾವವಿದ್ದವರಿಗೆ ಬಹು ಪ್ರಯೋಜನಕಾರಿ.

ಸ್ವರ್ಣಪ್ರಾಶನದ ಬಗ್ಗೆ ತಿಳಿಯಲು ಹಾಗು ಪಡೆಯಲು +919945850945 ಗೆ ಕರೆ ಮಾಡಿ

ಸ್ವರ್ಣ ಪ್ರಾಶನದ ದಿನಗಳು 2023

Swarna Prashana Date Swarna Prashana Day
8 ಜನವರಿ 2023ಆದಿತ್ಯವಾರ
4 ಫೆಬ್ರವರಿ 2023ಶನಿವಾರ
4 ಮಾರ್ಚ್ 2023ಶುಕ್ರವಾರ
31 ಮಾರ್ಚ್ 2023ಗುರುವಾರ
27ಏಪ್ರಿಲ್ 202ಗುರುವಾರ
25 ಮೇ 2023ಬುಧವಾರ
20 ಜೂನ್ 2023ಮಂಗಳವಾರ
18 ಜೂಲೈ 2023ಮಂಗಳವಾರ
14 ಆಗಸ್ಟ್ 2023ಸೋಮವಾರ
10 ಸೆಪ್ಟೆಂಬರ್ 2023ಆದಿತ್ಯವಾರ
8 ಅಕ್ಟೋಬರ್ 2023ಶನಿವಾರ
4 ನವೆಂಬರ್ 2023ಶನಿವಾರ
2 ಡಿಸೆಂಬರ್ 2023ಶುಕ್ರವಾರ
29 ಡಿಸೆಂಬರ್ 2023ಶುಕ್ರವಾರ

Share With Your Friends