ರೋಗೋತ್ಪತ್ತಿಯಲ್ಲಿ ತ್ರಿದೋಷಗಳ ಪಾತ್ರ

ರೋಗೋತ್ಪತ್ತಿಯಲ್ಲಿ ತ್ರಿದೋಷಗಳ ಪಾತ್ರ ಎಲ್ಲಾ ರೋಗಗಳಿಗೂ ಕಾರಣ ಕುಪಿತವಾದ ತ್ರಿದೋಷಗಳು. ತ್ರಿದೋಷಗಳ ಪ್ರಕೋಪಕ್ಕೆ ವಿವಿಧ ರೀತಿಯ ಅಹಿತ ಸೇವನೆಯೇ ಕಾರಣ ಎನ್ನುವುದು ಆಯುರ್ವೇದದ ಸಿದ್ಧಾಂತ. ” ಸರ್ವೇಷಾಮೇವ ರೋಗಾಣಾಂ ನಿದಾನಾಂ ಕುಪಿತ ಮಾಲಾಃ ।।೧೨॥ ತತ್ಪ್ರಕೋಪಸ್ಯ ತು ಪ್ರೋಕ್ತಂ ವಿವಿಧಾಹಿತ ಸೇವನಂ ॥” (ಅ. ಹೃ. ನಿ. ೧-೧೨ ) ಇಲ್ಲಿ ದೋಷಗಳಿಗೆ  “ಮಲ” ಶಬ್ದವನ್ನು ಬಳಸಿರುವುದರಿಂದ  ಇವು ದೇಹ ಮಾಲಿನ್ಯಕಾರಕ  ಹಾಗೂ ಇವುಗಳನ್ನು ಸಂಪೂರ್ಣ ಹೊರಹಾಕುವುದೇ ಚಿಕಿತ್ಸೆ ಎಂಬ …

Read more

ದೇಹ ಕಟ್ಟುವ ಶ್ಲೇಷ್ಮಾ

ದೇಹ ಕಟ್ಟುವ ಶ್ಲೇಷ್ಮಾ         ಸೂರ್ಯ, ಚಂದ್ರ, ವಾಯುಗಳಲ್ಲಿ ದಿಗ್ದೆಸೆಗಳಲ್ಲಿ ತಂಪೆರೆದು ವೃದ್ಧಿಗೆ ಕಾರಣವಾಗುವುದು ಚಂದ್ರ. ಅದೇ ರೀತಿ ಶರೀರದಲ್ಲಿ ಶೀತಗುಣದಿಂದ ವೃದ್ಧಿಗೆ ಕಾರಣವಾಗುವುದು ಮೂರನೆಯ ದೋಷ “ಕಫ“. ಶ್ಲಿಷ್ ಆಲಿಂಗನೇ ಎಂಬ ಧಾತುವಿನಿಂದ ಉತ್ಪತ್ತಿ ಹೊಂದಿದ ಶ್ಲೇಷ್ಮಾ ವಿವಿಧ ಜೀವಕೋಶಗಳನ್ನು ಪರಸ್ಪರ ಹೊಂದಿಸುವ, ಶರೀರದ ಕಾರ್ಯ ಸುಗಮವಾಗಿ ನಡೆಸುವ ಕಾರ್ಯ ಮಾಡುತ್ತದೆ.“ಕೇನ ಜಲೇನ ಫಲತಿ ಇತಿ ಕಫಃ” ಎಂಬ ವ್ಯುತ್ಪತ್ತಿ ಹೊಂದಿದ ಕಫ ದ್ರವಾಧಿಕ …

Read more

ಶರೀರದೊಳಗಿನ ಸೂರ್ಯ ‘ಪಿತ್ತ’

ಶರೀರದೊಳಗಿನ ಸೂರ್ಯ ‘ಪಿತ್ತ’ “ನ ಖಲು ಪಿತ್ತವ್ಯತಿರೇಕಾದನೋsಗ್ನಿರುಪಲಭ್ಯತೇ॥”                                                                            (ಸುಶ್ರುತ) “ಪಿತ್ತಾದೃತೇ ನ ಪಾಕಃ॥”       …

Read more

ತ್ರಿದೋಷಗಳಲ್ಲಿ ಪ್ರಧಾನ ದೋಷ – ವಾತ

ತ್ರಿದೋಷಗಳಲ್ಲಿ ಪ್ರಧಾನ ದೋಷ – ವಾತ ಸ್ವತಂತ್ರವೂ , ನಿತ್ಯವೂ, ಎಲ್ಲೆಡೆಗೆ ಕಂಡುಬಂದರೂ ಅವ್ಯಕ್ತವಾದ ವಾಯುವೇ ತ್ರಿದೋಷಗಳಲ್ಲಿ ಮೊದಲನೆಯದು. ರಜೋಗುಣ ಅಧಿಕವಾದ ಈ ವಾಯುವು ಶೀಘ್ರವಾಗಿ ರೋಗೋತ್ಪತ್ತಿಕಾರಕ. ಮಹಾವ್ಯಾಧಿಗಳನ್ನುಂಟುಮಾಡುವ  ಸ್ವಭಾವದ್ದು. ಮೂರು ದೋಷಗಳಲ್ಲಿಯೂ ವಾಯುವಿಗೆ ಮಾತ್ರ ಗತಿಯುಂಟು.“ವಾ ಗತಿ ಗಂಧನಯೋಃ” ಗತಿ ಮತ್ತು ಜ್ಞಾನಕ್ಕೆ ಕಾರಣವಾದದ್ದು ವಾತ ಎಂಬುದು ಶಬ್ಧ ವಾಖ್ಯೆ. ಸಮಸ್ಥಿತಿಯಲ್ಲಿರುವ ವಾತ ಆರೋಗ್ಯಕ್ಕೆ ಪೂರಕ. ಅದರ ಕಾರ್ಯಗಳು “ಉತ್ಸಾಹೋಚ್ಛಾ ಸನಿಃಶ್ವಾಸ ಚೇಷ್ಟಾವೇಗಃ ಪ್ರವರ್ತನೈಃ । ಸಮ್ಯಗ್ಗತ್ಯಾ ಚ …

Read more

ತ್ರಿದೋಷ ವಿಜ್ಞಾನದ ರಹಸ್ಯ

ತ್ರಿದೋಷ ವಿಜ್ಞಾನದ ರಹಸ್ಯ ಒಬ್ಬ ಟಿ.ವಿ ಮೆಕ್ಯಾನಿಕ್ ಯಶಸ್ವೀ ತಂತ್ರಜ್ಞನಾಗಬೇಕಾದರೆ ಆತನಿಗೆ ಟಿ. ವಿ. ನಿರ್ಮಾಣದ ಹಂತ ಹಂತಗಳ, ಅದರಲ್ಲಿ  ಜೋಡಿಸಲ್ಪಡುವ ಪ್ರತಿಯೊಂದೂ ವಸ್ತುಗಳ ವಿನ್ಯಾಸ , ರಚನೆ ಕುರಿತು ಆಮೂಲಾಗ್ರ ಜ್ಞಾನವಿರಬೇಕಾಗುತ್ತದೆ. ಅದೇ ರೀತಿ ಸೃಷ್ಟಿಕರ್ತನ ರಚನೆಯಾದ ಈ ಆಯುಸ್ಸಿನ ( ಶರೀರ, ಇಂದ್ರಿಯ, ಮನಸ್ಸು ಹಾಗೂ ಆತ್ಮಗಳ ಸಂಯೋಗ) ರಚನೆಯ ಹಂತ ಹಂತಗಳ, ಇದರಲ್ಲಿ ಜೋಡಿಸಲ್ಪಟ್ಟ ಪ್ರತಿಯೊಂದು ಅಂಗಾಂಗಗಳ ವಿನ್ಯಾಸ, ರಚನೆಯ ಕುರಿತು ಆಮೂಲಾಗ್ರ ಜ್ಞಾನವಿದ್ದಾಗ ಮಾತ್ರ …

Read more

ನಮ್ಮ ಜೀವನದ ಗುರಿ ಏನು?

ನಮ್ಮ ಜೀವನದ ಗುರಿ ಏನು? ನಮ್ಮಲ್ಲಿ ಅನೇಕರು  ಇಲ್ಲದಿದ್ದುದಕ್ಕಾಗಿ ಕೊರಗುತ್ತಾ ಇದ್ದುದನ್ನು ಗೌರವಿಸದೇ  ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಜೀವನದ ಗೊತ್ತು ಗುರಿಗಳರಿಯದೇ  ಕೇವಲ ‘ಸುಖ‘ವೆಂಬ ಮರೀಚಿಕೆಯನ್ನು ಅರಸುತ್ತಾ ಅಲೆದಾಡುತ್ತಿರುತ್ತೇವೆ. ವಸ್ತುತಃ ಪರಮಾತ್ಮನ ಅಂಶವಾದ ನಾವು ಎಲ್ಲವನ್ನೂ ಅರಿತಿರುತ್ತೇವೆ. ಆದರೂ ರಜಸ್ತಮಗಳಿಂದ ಆವೃತವಾಗಿರುವ ಕಾರಣದಿಂದ ಆಜ್ಞರಂತಿರುತ್ತೇವೆ. ಚರಕ ಸಂಹಿತೆಯಲ್ಲಿ “ಆತ್ಮಾ ಕಿಮಜ್ಞೋ ಜ್ಞಃ?” ಎಂಬ ಪ್ರಶ್ನೆಗೆ ಉತ್ತರ ನೀಡುತ್ತಾ ಆತ್ರೇಯರು – “ಆತ್ಮಾಜ್ಞಃ ಕರಣೈ ಯೋಗಾತ್ ಜ್ಞಾನಂ  ತ್ವಸ್ಯ ಪ್ರವರ್ತತೇ ।  ಕರಣಾನಾಮವೈಮಲ್ಯಾದಯೋಗಾದ್ವಾನ …

Read more

Introduction to Yoga and Yoga Sutra

The Indian philosophy is also known as ‘Darshana’s’. Unlike western philosophy which mainly depends on the intellect and logics, darshana’s are the wisdom of sages who has seen or understood the reality beyond the visible world. This knowledge was attained through a deep meditation in a pure mind. The darshans …

Read more

ಆರೋಗ್ಯ ಪ್ರಾಪ್ತಿಯ ಒಳಗುಟ್ಟು

ಆರೋಗ್ಯ ಪ್ರಾಪ್ತಿಯ  ಒಳಗುಟ್ಟು ಮನುಷ್ಯ ಸುಖಿಯಾದರೆ ಮಾತ್ರ ಸಾಲದು. ಇತರರ ಹಿತೈಷಿಯೂ ಆಗಬೇಕು. ಆರೋಗ್ಯ ಪ್ರಾಪ್ತಿಯ ನಿಯಮಗಳನ್ನು ನಿಯಮಿತವಾಗಿ ತನ್ನ ಜೀವನದಲ್ಲಿ ಅಳವಡಿಸುವುದರಿಂದ ತಾನು ಸುಖಿಯಾಗಬಲ್ಲ. ಆದರೆ, ತನ್ನಿಂದಾಗಿ ತನ್ನ ಬಂಧು ಬಳಗ, ಮಿತ್ರರು, ಗ್ರಾಮ-ನಗರ, ರಾಜ್ಯ, ದೇಶಗಳ ಹಿತಕ್ಕಾಗಿಯೂ ಪ್ರಯತ್ನ ಪಡಬೇಕು. ಹೀಗೆ ಸುಖಿಯೂ, ಹಿತೈಷಿಯೂ ಆದ ಮನುಷ್ಯ ಇಹಪರಗಳ ಹಿತಕ್ಕಾಗಿ ತನ್ನ ಬದುಕನ್ನು ಸರಿಯಾಗಿ ನಡೆಸಿದಂತಾಗುತ್ತದೆ. ಹೀಗೆ ಬದುಕುವ ಒಳಗುಟ್ಟನ್ನೇ ಆಯುರ್ವೇದ ಜಗತ್ತಿನ ಒಳಿತಿಗಾಗಿ ತೆರೆದಿಡುತ್ತದೆ.   …

Read more

ನಾವು ಆರೋಗ್ಯವಂತರೇ? (ಆರೋಗ್ಯ ಪರೀಕ್ಷೆಯ ೧೨ ಘಟ್ಟಗಳು)

ನಾವು ಆರೋಗ್ಯವಂತರೇ?

ನಾವು ಆರೋಗ್ಯವಂತರೇ? (ಆರೋಗ್ಯ ಪರೀಕ್ಷೆಯ ೧೨ ಘಟ್ಟಗಳು) ಅನೇಕ ಸಲ ‘ನಾನು ಆರೋಗ್ಯವಂತನೇ?’ ಎಂಬ ಜಿಜ್ಞಾಸೆ ಮೂಡುತ್ತದೆ. ಅನೇಕ ರೀತಿಯ ರಕ್ತ, ಮೂತ್ರ ಪರೀಕ್ಷೆ, ಸ್ಕ್ಯಾನಿಂಗ್ ಮಾಡಿ ನೋಡಿಯೂ ಸಹ ಕೆಲವೊಮ್ಮೆ ನಾವು ಆರೋಗ್ಯವಂತರೆನ್ನಲಾಗದು. ವಿಶೇಷವಾಗಿ ಯಾವುದೇ ಒಂದು ಖಾಯಿಲೆಯಿಂದ ಗುಣವಾದ ನಂತರ ಗುಣವಾಗಿರುವುದರ ಬಗ್ಗೆ ಖಾತ್ರಿ ಏನು? ಎಂಬ ಸಂಶಯ ತಲೆ ತಿನ್ನುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಖರ್ಚಿಲ್ಲದೇ,ನಮ್ಮ ಆರೊಗ್ಯದ ಬಗ್ಗೆ ನಿಶ್ಚಯವಾದ ತಿಳುವಳಿಕೆಗೆ ಮಾರ್ಗವೇನಾದರೂ ಇದೆಯೇ ಎಂದರೆ, …

Read more