Home / Archive by category "ದಿನಚರಿ"

ದಿನಚರಿ

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ! ಮಳೆಗಾಲದಲ್ಲಿ ಎರಡು ರೀತಿಯ ವಾತಾವರಣಗಳುಂಟು. ತೀವ್ರ ಮಳೆ, ಗಾಳಿ, ತಂಪಿನಿಂದ ಕೂಡಿದ ವಾತಾವರಣವೊಂದೆಡೆಯಾದರೆ, ಮಳೆ ಬಾರದೆ ಇರುವ ದಿನ ಇನ್ನೊಂದು. ಈ ಎರಡೂ ದಿನಗಳಂದೂ ಆಹಾರ - ವಿಹಾರಗಳ ವಿಧಾನ ಬೇರೆ ಬೇರೆ! ಮಳೆಗಾಲದಲ್ಲಿ ಮಳೆಯಿರದ ದಿನ! ಒಟ್ಟಿನಲ್ಲಿ ಜೀರ್ಣಶಕ್ತಿ ಮಂದವಾಗಿರುವ ದಿನಗಳಿವು. ಇಂತಹ ವಾತಾವರಣದಲ್ಲಿ "ಭಜೇತ್ ಸಾಧಾರಣಂ ಸರ್ವಂ ಊಷ್ಮಣಸ್ತೇಜನಂ ಯತ್ ।'' (ವಾಗ್ಭಟ) ಯಾವುದೇ ವಿಶೇಷವಿಲ್ಲದ ಷಡ್ರಸವಿರುವ ಆಹಾರವನ್ನು ಸೇವಿಸಬೇಕು. ಆದರೆ, ಅದು ಹ...
Read More

ಬೇಸಿಗೆಯ ಬೇಗೆಗೆ ಪಾನಕದ ತಂಪು

ಬೇಸಿಗೆಯ ಬೇಗೆಗೆ ಪಾನಕದ ತಂಪು ! ಬೇಸಿಗೆಯ ಬಿಸಿಲಿಗೆ, ಉಷ್ಣವಾಯುವಿನ ಹೊಡೆತ ಪ್ರತಿವರ್ಷ ನೂರಾರು ಜನರು ಬಲಿಯಾಗುತ್ತಿದ್ದಾರೆ. ಕಾರಣ ಈ ಋತುವಿನ ಸ್ವಭಾವವನ್ನು ಅರಿಯದೆ ಸೂಕ್ತ ಪರಿಹಾರವನ್ನು ಮಾಡದೇ ಇರುವುದೇ ಮುಖ್ಯ ಕಾರಣ. ತೀವ್ರತಾಪಕಾರಕವಾದ ಗ್ರೀಷ್ಮದ ಕುರಿತು ಮಹಾಕವಿ ಕಾಳಿದಾಸರು ಹೇಗೆ ವರ್ಣಿಸಿದ್ದಾರೆ ಗೊತ್ತೇ? " ಪಟುತರದವದಾಹೋಚ್ಛುಷ್ಕ ಸಸ್ಯಪ್ರರೋಹಾಃ ಪರುಷಪವನ ವೇಗೋತ್ಷಿಪ್ತ ಸಂಶುಷ್ಕಪರ್ಣಾಃ । ದಿನಕರ ಪರಿತಾಪಕ್ಷೀಣ ತೋಯಾಃ ಸಮಂತಾತ್ ವಿದಧತಿ ಭಯ ಮುಚ್ಷೈರ್ವೀಕ್ಷ್ಯ ಮಾಲಾವನಾ...
Read More

ಋತುಚರ್ಯೆ

ಋತುವಿಲಾಸ / ಕಾಲಕ್ಕೆ ತಕ್ಕಂತೆ ಕುಣಿಯಬೇಕು ( ಋತುಚರ್ಯೆ) ಋತುಚರ್ಯಾ ವಿಜ್ಞಾನ-೧ ಋತುವಿಲಾಸ ಇದೋ ಮುಂಜಾವು................. ಬಾಲ ರವಿ ತನ್ನ ಹೊಂಗಿರಣಗಳನ್ನು ಹೊರಸೂಸುತ್ತಾ ಮರೆಯಿಂದ ಮೇಲೆದ್ದು ಬರುತಿರುವ .... ಹಕ್ಕಿಗಳ ಚಿಲಿಪಿಲಿಗಾನ..... ಶಾಂತವಾದ ಜಗತ್ತು ಮೆಲ್ಲಗೆ ಎದ್ದು ತನ್ನ ಇರುವನ್ನು ತೋರುವಂತೆ ಚಟುವಟಿಕೆಗಳನ್ನು ಆರಂಭಿಸಿದೆ.ಬಿಸಿಲು ಮೇಲೇರುತ್ತಾ ಹೋಗಿ ಮಧ್ಯಾಹ್ನ ನಡುನೆತ್ತಿಯ ಸೂರ್ಯ ಜಗತ್ತಿನ ತುಂಬೆಲ್ಲಾ ಬಿಸಿ ಹರಡಿಸಿ ಬವಳಿಸುತ್ತಾನೆ....... ಸಂಜೆಗೆ ಪುನಃ ಪಡುವ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೨

ಸರ್ವ ಪ್ರಾಣಿಷು ಬಂಧುಭೂತಃ ಸ್ಯಾತ್ ಗುಬ್ಬಿಯೊಂದು ತೋಳದ ಬಾಯಲ್ಲಿ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಮೊರೆಯಿಟ್ಟಿತು. ಧಾವಿಸಿಬಂದ ಅಶ್ವಿನಿದೇವತೆಗಳು  ಗುಬ್ಬಿಯನ್ನು ತೋಳದ ಬಾಯಿಯಿಂದ ಬಿಡಿಸಿದರು ಎನ್ನುತ್ತದೆ ಋಗ್ವೇದದ ಅಶ್ವಿನಿಸೂಕ್ತದ ಮಂತ್ರವೊಂದು. ''ಯಾಭಿರ್ವರ್ತಿಕಾಂ ಗ್ರಸಿತಾಮಮುಂಚತಂ ತಾಭಿರೂಷು ಊತಿಭಿರಶ್ವಿನಾ ಗತಂ॥" (ಋ-೧=೧೧೨-೮) ಇದು ನಮಗೆಲ್ಲರಿಗೂ ಇರುವ ಆದರ್ಶದ ಗುರಿ. ಇಲ್ಲ ಪ್ರಾಣಿಗಳ ಬಗ್ಗೂ  ನಮಗೆ ಸಮಾನವಾದ ಪ್ರೀತಿ ಇರಲಿ ಎಂಬುದು ಆರ್ಷವಿಚಾರ. "ಶಂ ನೋ ಅಸ್ತು...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೧

ಸದ್ವೃತ್ತದಿಂದ ಆರೋಗ್ಯ ಇಂದ್ರಿಯ ವಿಜಯ! ನಾಗೇಶ್ವರ ನಾಯಕರಿಗೆ ಅನೇಕ ವರ್ಷಗಳಿಂದ ಆಸಿಡಿಟಿ. ಎಷ್ಟೇ ಚಿಕಿತ್ಸೆ ಮಾಡಿದರೂ ಕಡಿಮೆಯಾಗುತ್ತಿಲ್ಲ.ಕೆಲವೊಮ್ಮೆ ತಾತ್ಕಾಲಿಕ ಉಪಶಮನವಾದರೂ ಪುನಃ ಮೊದಲಿನಂತೆಯೇ ! ಅವರ ನಿತ್ಯ ಜೀವನದಲ್ಲಿಯೂ ಸಹ  ರೋಗೋತ್ಪತ್ತಿಗೆ ಕಾರಣವಾದ ಆಹಾರ ಸೇವನೆಯೂ ಈಗ ಅನೇಕ ವರ್ಷಗಳಿಂದಲೂ ಇಲ್ಲ. ಮತ್ತೆ ಏಕೆ ರೋಗ ಗುಣವಾಗುತ್ತಿಲ್ಲ? ಕೊನೆಗೊಮ್ಮೆ ವೃದ್ಧ  ವೈದ್ಯರೊಬ್ಬರ ಬಳಿ ಹೋದ ನಾಯಕರ ರೋಗದ ಮೂಲ ಸಿಕ್ಕೇಬಿಟ್ಟಿತು. ನಾಯಕರಿಗೆ ಸದಾ ಏನೋ ಅತೃಪ್ತಿ.ಇದರಿಂದ ಕ್ಷೋಭೆಗೊಳಗಾದ ...
Read More

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? -೨

ಶಿರಸ್ಸು ಇಂದ್ರಿಯಗಳ ರಕ್ಷಣೆಗೆ ತೈಲ ಗಂಡೂಷ ಬೆಚ್ಚಗಿನ ಎಣ್ಣೆಯನ್ನು ಬಾಯಲ್ಲಿ ತುಂಬಿಕೊಳ್ಳುವುದೇ "ಗಂಡೂಷ" ವಿಧಿ. ಇದನ್ನೇ ಬಾಯಲ್ಲಿ  ತುಂಬಿ ಮುಕ್ಕಳಿಸಿದರೆ "ಕವಲಗ್ರಹ". ಇವೆರಡೂ ಕಣ್ಣು, ಕಿವಿ, ಮೂಗು ಹಾಗೂ ಮುಖಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು ಹಾಗೂ ಖಾಯಿಲೆಯಿದ್ದಾಗ ಆಯಾ ರೋಗಕಾಯಕ ಔಷಧಗಳಿಂದ ಮಾಡಿದಾಗ ಗುಣಮಾಡಲು ಸಹಾಯಕ. ಸರಿಯಾದ ಪ್ರಮಾಣದಲ್ಲಿ 'ಗಂಡೂಷ'/'ಕವಲಗ್ರಹ' ಮಾಡಿದರೆ ದೇಹವೂ ರೋಗರಹಿತವಾಗುವುದಲ್ಲದೆ ಇಂದ್ರಿಯಗಳ ಬಲವೂ ಹಿಗ್ಗುತ್ತದೆ. ತೈಲ ಮಾತ್ರವಲ್ಲದೇ, ಅಯಾ ...
Read More

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? – ೧

ನಿಮ್ಮ ದಿನಚರಿ ಹೀಗಿರಲಿ ! ಪರಿಸರ ಮಾಲಿನ್ಯದಿಂದ 'ಸ್ವ'ರಕ್ಷಣೆ ಹೇಗೆ? - ೧ ''ಸ್ವಾಸ್ಥ್ಯ'' ಯಾರಿಗೆ ಬೇಡ? ಆದರೆ, ಬೆಳೆಯುತ್ತಿರುವ ನಗರಗಳು, ಗಗನಚುಂಬಿ ಕಟ್ಟಡಗಳು , ಕಡಿಯಲ್ಪಡುವ ಮರಗಳು , ಹೆಚ್ಚುತ್ತಿರುವ ವಾಹನಗಳು , ಎಲೆಕ್ಟ್ರಾನಿಕ್ ಉಪಕರಣಗಳು ಇತ್ಯಾದಿಗಳಿಂದ ದಿನೇ ದಿನೇ ಎಲ್ಲೆಡೆ ಹರಡುತ್ತಿರುವ ಪರಿಸರ ಮಾಲಿನ್ಯದಿಂದ 'ಸ್ವ' 'ಸ್ವಾಸ್ಥ್ಯ'ದ ರಕ್ಷಣೆ ಮಾಡಿಕೊಳ್ಳುವುದು ಹೇಗೆ? ಎಂಬುದೀಗ ಜ್ವಲಂತ ಪ್ರಶ್ನೆ. ಅದಕ್ಕೆ ಆಯುರ್ವೇದ ಅನೇಕ ರೀತಿಯ ಉಪಾಯಗಳನ್ನು ಹೇಳುತ್ತದೆ. ೧) ಸರ್ವಾಂಗ ಅಭ...
Read More
Top