Home / Archive by category "ಆಯುರ್ವೇದ ಸಿದ್ಧಾಂತ"

ಆಯುರ್ವೇದ ಸಿದ್ಧಾಂತ

ಶರತ್ಕಾಲದ ಚಂದ್ರಮ

ಶರತ್ಕಾಲದ ಚಂದ್ರಮ 'ಶರತ್ಕಾಲ ಚಂದ್ರಮನಂತೆ ನೂರ್ಕಾಲಬಾಳಿ ಬೆಳಗು!' ಇದು ಹಿರಿಯರು ಪೊಡಮಡಿದ ಚಿಣ್ಣರಿಗೆ ಮಾಡುವ ಶುಭಾಶೀರ್ವಾದ. ಶರತ್ಕಾಲದಲ್ಲಿ ಚಂದ್ರ ಭೂಮಿಗೆ ಅತೀ ಹತ್ತಿರ. ಹುಣ್ಣಿಮೆ ದಿನವಂತೂ ದೊಡ್ಡದಾಗಿ ಕೈಗೆ ಸಿಗುವಂತೆ ಕಾಣುವ ಈ ಚಂದಿರ, ಮಳೆಗಾಲ ಪೂರ್ತಿ ಮೋಡ ಮುಸುಕಿ ಕವಿದ ಕತ್ತಲೆಯಿಂದ ಹೊರಬರುವ ಈ ಕಾಲ ನಿಜಕ್ಕೂ ಅಪ್ಯಾಯಮಾನವಾದದ್ದು. ನದಿ ಕೆರೆಗಳ ಮಣ್ಣು ಕರಡಿದ ನೀರು ತಿಳಿಯಾಗಿ ಶುಭ್ರವಾದ ಜಲ ಎಲ್ಲೆಡೆ ಕಾಣಸಿಗುವುದು. ತಿಳಿ ನೀಲಿಯಾದ ಆಕಾಶ, ಪ್ರಕಾಶಮಾನವಾದ ಸೂರ್ಯನ ಬೆಳಕು ಎಲ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೫

ಯಶಸ್ಸಿನ ಹಲವು ಸೂತ್ರಗಳಿವು  ! ಜೀವನ ಸಂಗ್ರಾಮದಲ್ಲಿ ಪ್ರತಿ ಹೆಜ್ಜೆಯಲ್ಲೂ ಮಾನವನಿಗೆ ಹೊಸ ಹೊಸ ಪರೀಕ್ಷೆ ! ಯಾವ ರೀತಿಯ ಜೀವನ ಶೈಲಿ ನಮಗೆ ಭೌತಿಕ ಪ್ರಪಂಚದಲ್ಲಿ ಯಶಸ್ಸು ಜೊತೆ ಜೊತೆಗೆ ಆಧ್ಯಾತ್ಮಿಕವಾಗಿ ಶ್ರೇಯಸ್ಸು ಎರಡನ್ನೂ ಒದಗಿಸಬಹುದು ಎಂಬ ಕುರಿತು ಚರಕರ ಕಿವಿ ಮಾತುಗಳು ನಿಜಕ್ಕೂ ಆಳವಾದ ಚಿಂತನೆಯಿಂದ ಕೂಡಿದ್ದು ! ೧. ನ ಕಾರ್ಯಕಾಲಮತಿಪಾತಯೇತ್: ಆಗಬೇಕಾದ ಕೆಲಸವನ್ನು ಸಕಾಲಕ್ಕೆ ಮುಗಿಸಬೇಕು. ಗರ್ಭಾಷ್ಟಮಕ್ಕೆ ಉಪನಯನ ಎಂಬುದು ಶಾಸ್ತ್ರವಿಧಿ ಎಂದ ಮೇಲೆ ಆಗಲೇ ಮುಗಿಸಬೇಕು.ಇಲ್ಲ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೩

ಅಗ್ನಿಮುಪಚರೇತ ಋಗ್ವೇದದ ಆರಂಭಿಕ ಮಂತ್ರ ಅಗ್ನಿ ಕುರಿತದ್ದು ! ಅಗ್ನಿದೇವ ನಾವು ಕೊಡುವ ಹವಿಸ್ಸನ್ನು ತಾನೂ ಸ್ವೀಕರಿಸಿ ಇತರರಿಗೆ ತಲುಪಿಸುವನು. ಸೃಷ್ಟಿಕರ್ತನ ವ್ಯವಸ್ಥೆ ಇದು. " ಸಹಯಜ್ಞಾಃ ಪ್ರಜಾಃ ಸೃಷ್ಟ್ವಾಪುರೋವಾಚ ಪ್ರಜಾಪತಿಃ । ಆನೇನ ಪ್ರಸವಿಷ್ಯಧ್ವೇಮೇಷವೋಽಸ್ತ್ವಿಷ್ಟಕಾಮಧುಕ್ ॥೧೦॥ ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ । ಪರಸ್ಪರಂ ಭಾವಯಂತಃ ಶೇಯಃ ಪರಮವಾಪ್ಸ್ಯಥ ॥೧೧॥ ಇಷ್ಟಾನ್ ಭೋಗಾನ್ ಹಿ ವೋ ದೇವಾಃ ದಾಸ್ಯಂತೇ ಯಜ್ಞಭಾವಿತಾಃ । ತೈರ್ದತ್ತಾನಪ್ರದಾಯೈಭ್ಯೋ ಯೋ ಭುಂಕ...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೨

ಸರ್ವ ಪ್ರಾಣಿಷು ಬಂಧುಭೂತಃ ಸ್ಯಾತ್ ಗುಬ್ಬಿಯೊಂದು ತೋಳದ ಬಾಯಲ್ಲಿ ಸಿಕ್ಕಿಹಾಕಿಕೊಂಡಿತು. ಸಹಾಯಕ್ಕಾಗಿ ಮೊರೆಯಿಟ್ಟಿತು. ಧಾವಿಸಿಬಂದ ಅಶ್ವಿನಿದೇವತೆಗಳು  ಗುಬ್ಬಿಯನ್ನು ತೋಳದ ಬಾಯಿಯಿಂದ ಬಿಡಿಸಿದರು ಎನ್ನುತ್ತದೆ ಋಗ್ವೇದದ ಅಶ್ವಿನಿಸೂಕ್ತದ ಮಂತ್ರವೊಂದು. ''ಯಾಭಿರ್ವರ್ತಿಕಾಂ ಗ್ರಸಿತಾಮಮುಂಚತಂ ತಾಭಿರೂಷು ಊತಿಭಿರಶ್ವಿನಾ ಗತಂ॥" (ಋ-೧=೧೧೨-೮) ಇದು ನಮಗೆಲ್ಲರಿಗೂ ಇರುವ ಆದರ್ಶದ ಗುರಿ. ಇಲ್ಲ ಪ್ರಾಣಿಗಳ ಬಗ್ಗೂ  ನಮಗೆ ಸಮಾನವಾದ ಪ್ರೀತಿ ಇರಲಿ ಎಂಬುದು ಆರ್ಷವಿಚಾರ. "ಶಂ ನೋ ಅಸ್ತು...
Read More

ಆರೋಗ್ಯಕ್ಕಾಗಿ ಹೀಗಿರಲಿ ನಮ್ಮ ನಡವಳಿಕೆ – ೧

ಸದ್ವೃತ್ತದಿಂದ ಆರೋಗ್ಯ ಇಂದ್ರಿಯ ವಿಜಯ! ನಾಗೇಶ್ವರ ನಾಯಕರಿಗೆ ಅನೇಕ ವರ್ಷಗಳಿಂದ ಆಸಿಡಿಟಿ. ಎಷ್ಟೇ ಚಿಕಿತ್ಸೆ ಮಾಡಿದರೂ ಕಡಿಮೆಯಾಗುತ್ತಿಲ್ಲ.ಕೆಲವೊಮ್ಮೆ ತಾತ್ಕಾಲಿಕ ಉಪಶಮನವಾದರೂ ಪುನಃ ಮೊದಲಿನಂತೆಯೇ ! ಅವರ ನಿತ್ಯ ಜೀವನದಲ್ಲಿಯೂ ಸಹ  ರೋಗೋತ್ಪತ್ತಿಗೆ ಕಾರಣವಾದ ಆಹಾರ ಸೇವನೆಯೂ ಈಗ ಅನೇಕ ವರ್ಷಗಳಿಂದಲೂ ಇಲ್ಲ. ಮತ್ತೆ ಏಕೆ ರೋಗ ಗುಣವಾಗುತ್ತಿಲ್ಲ? ಕೊನೆಗೊಮ್ಮೆ ವೃದ್ಧ  ವೈದ್ಯರೊಬ್ಬರ ಬಳಿ ಹೋದ ನಾಯಕರ ರೋಗದ ಮೂಲ ಸಿಕ್ಕೇಬಿಟ್ಟಿತು. ನಾಯಕರಿಗೆ ಸದಾ ಏನೋ ಅತೃಪ್ತಿ.ಇದರಿಂದ ಕ್ಷೋಭೆಗೊಳಗಾದ ...
Read More

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ?-೩

ಪರಿಸರ ಮಾಲಿನ್ಯದಿಂದ 'ಸ್ವ'ರಕ್ಷಣೆ ಹೇಗೆ? - ೩ ಬೆಂಗಳೂರು, ಚೆನ್ನೈ, ದಿಲ್ಲಿ, ಕೋಲ್ಕತಾ ನಗರಗಳಲ್ಲಿ ಪರಿಸರ ಮಾಲಿನ್ಯ ಮಿತಿಮೀರಿದೆ. ಎಷ್ಟರಮಟ್ಟಿಗೆ ಇದು ಹೆಚ್ಚಿದೆಯೆಂದರೆ, ಒಂದು ಸಲ ನಗರ ಮಧ್ಯ ಹೋಗಿ ಬಂದವರ ಮೈಯ್ಯಲ್ಲಿ ದಪ್ಪನೆಯ ಕಪ್ಪುಧೂಳು ಹೆಪ್ಪುಗಟ್ಟಿ ಕೂತಿರುತ್ತದೆ. ಎಚ್೧ಎನ್೧, ಟಿ.ಬಿ, ಹಂದಿ ಜ್ವರ ಮುಂತಾದ ಪ್ರಾಣವಹ ಸ್ರೋತಸ್ಸನ್ನು ಹಾಳುಮಾಡಿ ಬರುವ ವ್ಯಾಧಿಗಳು ಸಹ ಮಿತಿಮೀರಿವೆ. ಇವುಗಳನ್ನು ತಡೆಯಲು ಅಭ್ಯಂಗ, ಕರ್ಣಪೂರಣ, ಪ್ರತಿಮರ್ಶನಸ್ಯ, ಗಂಡೂಷ, ಪಾದಾಭ್ಯಂಗ, ಶಿರೋಭ್ಯ...
Read More

ಪರಿಸರ ಮಾಲಿನ್ಯದಿಂದ ‘ಸ್ವ’ರಕ್ಷಣೆ ಹೇಗೆ? -೨

ಶಿರಸ್ಸು ಇಂದ್ರಿಯಗಳ ರಕ್ಷಣೆಗೆ ತೈಲ ಗಂಡೂಷ ಬೆಚ್ಚಗಿನ ಎಣ್ಣೆಯನ್ನು ಬಾಯಲ್ಲಿ ತುಂಬಿಕೊಳ್ಳುವುದೇ "ಗಂಡೂಷ" ವಿಧಿ. ಇದನ್ನೇ ಬಾಯಲ್ಲಿ  ತುಂಬಿ ಮುಕ್ಕಳಿಸಿದರೆ "ಕವಲಗ್ರಹ". ಇವೆರಡೂ ಕಣ್ಣು, ಕಿವಿ, ಮೂಗು ಹಾಗೂ ಮುಖಕ್ಕೆ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು ಹಾಗೂ ಖಾಯಿಲೆಯಿದ್ದಾಗ ಆಯಾ ರೋಗಕಾಯಕ ಔಷಧಗಳಿಂದ ಮಾಡಿದಾಗ ಗುಣಮಾಡಲು ಸಹಾಯಕ. ಸರಿಯಾದ ಪ್ರಮಾಣದಲ್ಲಿ 'ಗಂಡೂಷ'/'ಕವಲಗ್ರಹ' ಮಾಡಿದರೆ ದೇಹವೂ ರೋಗರಹಿತವಾಗುವುದಲ್ಲದೆ ಇಂದ್ರಿಯಗಳ ಬಲವೂ ಹಿಗ್ಗುತ್ತದೆ. ತೈಲ ಮಾತ್ರವಲ್ಲದೇ, ಅಯಾ ...
Read More

ನಾವೂ ನಿದ್ರೆಯನ್ನು ಗೆಲ್ಲಬಹುದೇ?

ನಾವೂ ನಿದ್ರೆಯನ್ನು  ಗೆಲ್ಲಬಹುದೇ?  ಅರ್ಜುನನಿಗೆ " ಗುಡಾಕೇಶ" ಎಂಬ ಹೆಸರಿದೆ. " ನಿದ್ರೆಯನ್ನು ಗೆದ್ದವನು" ಎಂದರ್ಥದಂತೆ. ಹಾಗೆಂದರೇನು? ನಿದ್ದೆಯಿಲ್ಲದೆ, ಯಾವುದೇ ತೊಂದರೆಯೂ ಇಲ್ಲದೆ ಸುಖವಾಗಿರಬಲ್ಲವನು ಎಂದರ್ಥ. ಅನೇಕ ಯೋಗಿಗಳು ಇಂತಹ ಸಿದ್ಧಿಯನ್ನು ಪಡೆದಿದ್ದರು ಎಂಬುದನ್ನು ಕೇಳಿದ್ದೇವೆ. ಇದನ್ನು ಎಲ್ಲರೂ ಸಾಧಿಸಬಹುದೇ? ಎಂಬುದೀಗ ಯಕ್ಷಪ್ರಶ್ನೆ. ವಸ್ತುತಃ ಪ್ರಾಣಿಗಳಿಗೆ ನಿದ್ರೆಯ ಅವಶ್ಯಕತೆಯೇನು? ಅದರಿಂದಾಗುವ ಪ್ರಯೋಜನವೇನು? ಇತ್ಯಾದಿ ನಿದ್ರೆಯ ಸ್ವರೂಪವನ್ನು  ಮೊದಲು ಅರಿಯೋಣ. ನ...
Read More

ಆಯುರ್ವೇದದಲ್ಲಿ ಪುನರ್ಜನ್ಮ ಸಿದ್ಧಾಂತ

ಆಯುರ್ವೇದದಲ್ಲಿ ಪುನರ್ಜನ್ಮ ಸಿದ್ಧಾಂತ ಪ್ರಾಣಿ'ಜನ್ಮ'ದ ಒಳಗುಟ್ಟೇನು? ಇಲ್ಲಿ ಮಾಡಬೇಕಾದ್ದೇನು? ಪ್ರತಿಯೊಬ್ಬರಿಗೂ ಉಂಟಾಗುವ ವಿಶಿಷ್ಟ ಅನುಭವಗಳ ಮೂಲ ಯಾವುದು? ಎಂಬುದು ಜನ್ಮ ತಳೆದ ಪ್ರತಿಯೊಬ್ಬರಿಗೂ  ಅನೇಕ ಬಾರಿ ಬರುವ  ಸಹಜ ಪ್ರಶ್ನೆ. ಚರಕ ಸಂಹಿತೆಯ " ತಿಸ್ರೈಷಣೀಯಂ" ಎಂಬ ಅಧ್ಯಾಯದಲ್ಲಿ ಈ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಪ್ರತಿಯೊಂದು ಜೀವಿಯೂ  ಇಹ ಪರಗಳ ಶ್ರೇಯಸ್ಸಿಗಾಗಿ  ತನ್ನ ಬುದ್ಧಿಶಕ್ತಿ ಪರಾಕ್ರಮಗಳಿಂದ ಮೂರು ವಿಷಯಗಳ ಪ್ರಾಪ್ತಿಗಾಗಿ ವಿಶಿಷ್ಟ ಪ್ರಯತ್ನ ಮಾಡಬೇಕಾಗಿದೆ. ...
Read More

ರೋಗಕ್ಕೆ ಆಸೆಯೇ ಮೂಲ ಕಾರಣ – ೨

ರೋಗಕ್ಕೆ ಆಸೆಯೇ ಮೂಲ ಕಾರಣ - ೨ ಧೀಭ್ರಂಶ: "ವಿಷಮಾಭಿನಿವೇಶೋ ಯೋ ನಿತ್ಯಾನಿತ್ಯೇ ಹಿತಾಹಿತೇ। ಜ್ಞೇಯಃ ಸ ಬುದ್ಧಿವಿಭ್ರಂಶಃ ಸಮಂ ಬುದ್ಧಿರ್ಹಿ ಪಶ್ಯತಿ॥೯೯॥" (ಚ. ಶಾ.೧) ನಿತ್ಯ-ಅನಿತ್ಯ ವಸ್ತುಗಳಲ್ಲಿ ಹಿತಾ-ಹಿತಗಳ ವಿವೇಚನೆಯಲ್ಲಿ ವಿಷಮರೀತಿಯ ಜ್ಞಾನ ಎಲ್ಲಿ ಉಂಟಾಗುವುದೋ ಅದನ್ನು "ಬುದ್ಧಿ ವಿಭ್ರಂಶ" ಎನ್ನುವರು. ಸಮಬುದ್ಧಿಯುಳ್ಳವರು ಸರಿಯಾದದ್ದನ್ನೇ ಗ್ರಹಿಸುತ್ತಾರೆ.   ಧೃತಿ ಭ್ರಂಶ: "ವಿಷಯಪ್ರವಣಂ ಸತ್ವಂ ಧೃತಿಭ್ರಂಶಾನ್ನ ಶಕ್ಯತೇ। ನಿಯಂತುಮಹಿತಾದರ್ಥಾತ್ ಧೃತಿರ್ಹಿ ನಿಯಮಾತ್ಮ...
Read More
Top