ಎಷ್ಟು ನೀನುಂಡರೇಂ

ಎಷ್ಟು ನೀನುಂಡರೇಂ...... ಡಿವಿಜಿಯವರ ಕಗ್ಗದ ಪದ್ಯವೊಂದುಂಟು;  "ಎಷ್ಟು ನೀನುಂಡರೇಂ? ಪುಷ್ಟಿ ಮೈಗಾಗುವುದು।  ಹೊಟ್ಟೆ ಜೀರ್ಣಿಸುವಷ್ಟೇ; ಮಿಕ್ಕುದೆಲ್ಲ ಕಸ।  ಎಷ್ಟು ಗಳಿಸಿಟ್ಟೊಡಂ ನಿನಗೆ ದಕ್ಕುವುದೆಷ್ಟು?  ಮುಷ್ಟಿ ಪಿಷ್ಟವು ತಾನೆ? - ಮಂಕುತಿಮ್ಮ॥" ಕೆಲವು ತಾಯಂದಿರು ಮಕ್ಕಳು ಗಟ್ಟಿಯಾಗಲೆಂದು ಪದೇ ಪದೇ ತಿನ್ನಿಸಿ ಖಾಯಿಲೆ ತರಿಸಿಕೊಳ್ಳುವುದನ್ನು ಕಂಡು  ಈ ಪದ್ಯ ನೆನಪಾಗುವುದುಂಟು. ವಸ್ತುತಃ ಸಕಾಲದಲ್ಲಿ ಆಹಾರ  ಸೇವಿಸದಿದ್ದರೂ ಕಷ್ಟ, ಅತಿಯಾಗಿ ತಿಂದರೂ ತೊಂದರೆ. ಹಿತಮಿತವಾಗ...
Read More

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ

ಒಂದೇ ಸ್ವಭಾವದ ಆಹಾರದ ನಿತ್ಯ ಸೇವನೆ ಬೇಡ! ಜಿಹ್ವಾ ಚಾಪಲ್ಯದಿಂದಲೋ, ಅನಿವಾರ್ಯತೆಯಿಂದಲೋ, ಅಜ್ಞಾನದಿಂದಲೋ ಕೆಲವೊಮ್ಮೆ ಒಂದೇ ಸ್ವಭಾವದ ಆಹಾರವನ್ನು ಅನೇಕ ದಿನ ನಿರಂತರ ಸೇವಿಸಿ ತೊಂದರೆ ಅನುಭವಿಸುವವರುಂಟು. ಮಿತ್ರರೊಬ್ಬರು, ೩ ವರ್ಷ ಪ್ರತಿನಿತ್ಯ 'ಬದನೆಕಾಯಿ' ಸೇವಿಸಿದರು, ಅದು ಬಹಳ ರುಚಿಯೆಂದು. ಬದನೆಕಾಯಿ ಕ್ಷಾರಗುಣಗಳಿಂದ ಕೂಡಿದ್ದು, ಹೆಚ್ಚಾಗಿ ಸೇವಿಸಿದರೆ ಅದು ಪಿತ್ತವನ್ನು ಹೆಚ್ಚಿಸಿ ಕ್ಷಾರ ಲವಣ ಗುಣದಿಂದ ಮೂತ್ರಾಶ್ಮರೀ, ಉಷ್ಣತೆ, ಬಾವು, ಪಿತ್ತಜ, ಮೇಹ ಮುಂತಾದುವುಗಳನ್ನು ಉಂ...
Read More

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೨ "ಸ್ವಾಮೀ, ನನಗೆ ಹಸಿವೆಯಾಗುತ್ತಲೇ ಇಲ್ಲ. ತಿಂದ ಕೂಡಲೇ ಹೊಟ್ಟೆಯುಬ್ಬರ. ಬೆಳಗ್ಗೆ ಏಳುತ್ತಿರುವಾಗಲೇ ತಲೆ ಧಿಮ್ಮೆಂದು ತಿರುಗುತ್ತದೆ. ಇಡೀ ದಿನ ತಲೆನೋವು. ಉತ್ಸಾಹವೇ ಇಲ್ಲ. ಜೀವನವೇ ಸಾಕು ಸಾಕಾಗಿದೆ." ಎಂದರು. ಕೊಂಚ ಇವರ ದಿನಚರಿಯನ್ನು ಗಮನಿಸೋಣವೆಂದು ಬೆಳಗಿನಿಂದ ರಾತ್ರಿಯವರೆಗೂ ಏನೇನು ಆಹಾರ ಸೇವಿಸುತ್ತಿರುವಿರೆಂದು ಕೇಳಿದೆ. ಅವರ ಕತೆ ಕೇಳಿ ನಿಜಕ್ಕೂ ನಗು ಬಂತು. ಬೆಳಗ್ಗೆ ೬ ಘಂಟೆಗೆ ಟೀ ಹಾಗೂ ಬಿಸ್ಕೇಟ್ ಅಂತೆ. ೮ ಘಂಟೆಗೆ ದೋ...
Read More

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧

ಪಾಚಕಾಗ್ನಿಯೆಂಬ ದೇಹಾಗ್ನಿಗೆ ಆಹಾರವೇ ಹವಿಸ್ಸು -೧  "ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ। ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ ॥" (ಗೀತೆ ೧೫-೧೪) ಆಹಾರ ಸೇವನೆ ಎಂಬುದು ಒಂದು ನಿತ್ಯ ಯಜ್ಞ! ಇದಕ್ಕೆ ಹವಿಸ್ಸು ಆಹಾರ! ಹೀಗೆ ಸೇವಿಸಿದ ಆಹಾರದ ಪವಿತ್ರತೆಯಿಂದ ದೇಹಧಾತುಗಳ ಪುಷ್ಟಿ. ಆಹಾರ ಸಂಭವಂ ವಸ್ತು ರೋಗಾಶ್ಚಾಹಾರಾ ಸಂಭವಾ ॥ (ಚರಕ) ದೇಹ ಆಹಾರದಿಂದಲೇ ಸಂಭವಿಸುತ್ತದೆ. ದೇಹಕ್ಕೆ ಬರುವ ರೋಗಗಳು ಆಹಾರದ ಏರುಪೇರಿನಿಂದಲೇ ಉಂಟಾಗುತ್ತದೆ. ಪಾಚಕಾಗ...
Read More

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ

ಮಳೆಗಾಲಕ್ಕೆ ಮದ್ದು ಅಪ್ಪೆಹುಳಿ! ಮಳೆಗಾಲದಲ್ಲಿ ಎರಡು ರೀತಿಯ ವಾತಾವರಣಗಳುಂಟು. ತೀವ್ರ ಮಳೆ, ಗಾಳಿ, ತಂಪಿನಿಂದ ಕೂಡಿದ ವಾತಾವರಣವೊಂದೆಡೆಯಾದರೆ, ಮಳೆ ಬಾರದೆ ಇರುವ ದಿನ ಇನ್ನೊಂದು. ಈ ಎರಡೂ ದಿನಗಳಂದೂ ಆಹಾರ - ವಿಹಾರಗಳ ವಿಧಾನ ಬೇರೆ ಬೇರೆ! ಮಳೆಗಾಲದಲ್ಲಿ ಮಳೆಯಿರದ ದಿನ! ಒಟ್ಟಿನಲ್ಲಿ ಜೀರ್ಣಶಕ್ತಿ ಮಂದವಾಗಿರುವ ದಿನಗಳಿವು. ಇಂತಹ ವಾತಾವರಣದಲ್ಲಿ "ಭಜೇತ್ ಸಾಧಾರಣಂ ಸರ್ವಂ ಊಷ್ಮಣಸ್ತೇಜನಂ ಯತ್ ।'' (ವಾಗ್ಭಟ) ಯಾವುದೇ ವಿಶೇಷವಿಲ್ಲದ ಷಡ್ರಸವಿರುವ ಆಹಾರವನ್ನು ಸೇವಿಸಬೇಕು. ಆದರೆ, ಅದು ಹ...
Read More

ಶರತ್ಕಾಲದ ಚಂದ್ರಮ

ಶರತ್ಕಾಲದ ಚಂದ್ರಮ 'ಶರತ್ಕಾಲ ಚಂದ್ರಮನಂತೆ ನೂರ್ಕಾಲಬಾಳಿ ಬೆಳಗು!' ಇದು ಹಿರಿಯರು ಪೊಡಮಡಿದ ಚಿಣ್ಣರಿಗೆ ಮಾಡುವ ಶುಭಾಶೀರ್ವಾದ. ಶರತ್ಕಾಲದಲ್ಲಿ ಚಂದ್ರ ಭೂಮಿಗೆ ಅತೀ ಹತ್ತಿರ. ಹುಣ್ಣಿಮೆ ದಿನವಂತೂ ದೊಡ್ಡದಾಗಿ ಕೈಗೆ ಸಿಗುವಂತೆ ಕಾಣುವ ಈ ಚಂದಿರ, ಮಳೆಗಾಲ ಪೂರ್ತಿ ಮೋಡ ಮುಸುಕಿ ಕವಿದ ಕತ್ತಲೆಯಿಂದ ಹೊರಬರುವ ಈ ಕಾಲ ನಿಜಕ್ಕೂ ಅಪ್ಯಾಯಮಾನವಾದದ್ದು. ನದಿ ಕೆರೆಗಳ ಮಣ್ಣು ಕರಡಿದ ನೀರು ತಿಳಿಯಾಗಿ ಶುಭ್ರವಾದ ಜಲ ಎಲ್ಲೆಡೆ ಕಾಣಸಿಗುವುದು. ತಿಳಿ ನೀಲಿಯಾದ ಆಕಾಶ, ಪ್ರಕಾಶಮಾನವಾದ ಸೂರ್ಯನ ಬೆಳಕು ಎಲ...
Read More

ಚಳಿಗಾಲದ ದಿನಚರ್ಯೆ

  ಹೀಗಿರಲಿ ...ನಿಮ್ಮ ಚಳಿಗಾಲದ ದಿನಚರ್ಯೆ! " ಈ ವರ್ಷ ನೆಲ್ಲಿ ಫಸಲು ಇಲ್ಲವೇ ಇಲ್ಲ. ಎಲ್ಲೋ ಕೆಲವು ಗಿಡಗಳಿಗೆ ಕೆಲವೇ ಕಾಯಿಗಳು ಲಭ್ಯ ಡಾಕ್ಟ್ರೇ" ಎಂಬುದು ಹಲವು ರೈತರ ಅಳಲು. ನೆಲ್ಲಿ ಉತ್ತಮವಾದ ಆಹಾರವೂ ಹೌದು, ಔಷಧವೂ ಹೌದು. ಇದರ ಲಭ್ಯತೆ ಸಾಮಾನ್ಯವಾಗಿ ಚಳಿಗಾಲದಲ್ಲಿ ಯಾಕಿರಬಹುದು? ದೇಹಕ್ಕೆ ಬಲಕಾರಕವಾದ ಆಹಾರವನ್ನು ಸೇವಿಸಿ ಶರೀರವನ್ನು ಸದೃಢಪಡಿಸಿಕೊಳ್ಳಬೇಕಾದ ಕಾಲವಿದು. ಈ ಕಾಲದಲ್ಲಿಯೇ ಸರ್ವಧಾತುವರ್ಧಕವೂ, ಬಲವರ್ಧಕವೂ ಹೌದು ನೆಲ್ಲಿಯ ಲಭ್ಯತೆ. ಈ ಋತುವಿನಲ್ಲಿ ಇಡೀ ವರ...
Read More

ಬೇಸಿಗೆಯ ಬೇಗೆಗೆ ಪಾನಕದ ತಂಪು

ಬೇಸಿಗೆಯ ಬೇಗೆಗೆ ಪಾನಕದ ತಂಪು ! ಬೇಸಿಗೆಯ ಬಿಸಿಲಿಗೆ, ಉಷ್ಣವಾಯುವಿನ ಹೊಡೆತ ಪ್ರತಿವರ್ಷ ನೂರಾರು ಜನರು ಬಲಿಯಾಗುತ್ತಿದ್ದಾರೆ. ಕಾರಣ ಈ ಋತುವಿನ ಸ್ವಭಾವವನ್ನು ಅರಿಯದೆ ಸೂಕ್ತ ಪರಿಹಾರವನ್ನು ಮಾಡದೇ ಇರುವುದೇ ಮುಖ್ಯ ಕಾರಣ. ತೀವ್ರತಾಪಕಾರಕವಾದ ಗ್ರೀಷ್ಮದ ಕುರಿತು ಮಹಾಕವಿ ಕಾಳಿದಾಸರು ಹೇಗೆ ವರ್ಣಿಸಿದ್ದಾರೆ ಗೊತ್ತೇ? " ಪಟುತರದವದಾಹೋಚ್ಛುಷ್ಕ ಸಸ್ಯಪ್ರರೋಹಾಃ ಪರುಷಪವನ ವೇಗೋತ್ಷಿಪ್ತ ಸಂಶುಷ್ಕಪರ್ಣಾಃ । ದಿನಕರ ಪರಿತಾಪಕ್ಷೀಣ ತೋಯಾಃ ಸಮಂತಾತ್ ವಿದಧತಿ ಭಯ ಮುಚ್ಷೈರ್ವೀಕ್ಷ್ಯ ಮಾಲಾವನಾ...
Read More

ಕಾಲಕ್ಕೆ ತಕ್ಕಂತೆ ಕುಣಿಯಬೇಕು

ಕಾಲಕ್ಕೆ ತಕ್ಕಂತೆ ಕುಣಿಯಬೇಕು "ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ....... ಹೊಸ ವರುಷಕೆ ಹೊಸ ವರುಷವ ಹೊಸತು ಹೊಸತು ತರುತಿದೆ...... ಸಾಂಪ್ರದಾಯಿಕವಾಗಿ ಹೋಳಿಗೆ, ತುಪ್ಪ, ಬೇವು- ಬೆಲ್ಲ ಮೆಲ್ಲುವ ಮೋಜಿನ ಸಮಯ ದೂರವಿದ್ದರೂ ಹೊಸ ವಸಂತದ ಆಗಮನದ ಸೂಚನೆಗಳಂತೂ ಮಾವಿನ ಚಿಗುರೂ, ಮಾಮರದ ಕೋಗಿಲೆಯ ಕಂಠವೂ ಸಾರಿ ಹೇಳುತ್ತಿದೆ. ಅಂತೆಯೇ ಹಿಮಾಲಯ ಕರಗಿ ಗಂಗೆಯ ಮಡಿಲ ತುಂಬಿದಂತೆ, ಬಿಸಿಲಿನಿಂದ ಕರಗಿದ ಕಫ ಮೂಗಿನಿಂದ ಬಳಬಳನೆ ಹರಿಯಲಾರಂಭಿಸಿದೆ. ಹೊಟ್ಟೆಯಲ್ಲಿ ತಳಮಳ, ಹಸಿವು ಇಂಗುತ್ತ...
Read More

ಋತುಚರ್ಯೆ

ಋತುವಿಲಾಸ / ಕಾಲಕ್ಕೆ ತಕ್ಕಂತೆ ಕುಣಿಯಬೇಕು ( ಋತುಚರ್ಯೆ) ಋತುಚರ್ಯಾ ವಿಜ್ಞಾನ-೧ ಋತುವಿಲಾಸ ಇದೋ ಮುಂಜಾವು................. ಬಾಲ ರವಿ ತನ್ನ ಹೊಂಗಿರಣಗಳನ್ನು ಹೊರಸೂಸುತ್ತಾ ಮರೆಯಿಂದ ಮೇಲೆದ್ದು ಬರುತಿರುವ .... ಹಕ್ಕಿಗಳ ಚಿಲಿಪಿಲಿಗಾನ..... ಶಾಂತವಾದ ಜಗತ್ತು ಮೆಲ್ಲಗೆ ಎದ್ದು ತನ್ನ ಇರುವನ್ನು ತೋರುವಂತೆ ಚಟುವಟಿಕೆಗಳನ್ನು ಆರಂಭಿಸಿದೆ.ಬಿಸಿಲು ಮೇಲೇರುತ್ತಾ ಹೋಗಿ ಮಧ್ಯಾಹ್ನ ನಡುನೆತ್ತಿಯ ಸೂರ್ಯ ಜಗತ್ತಿನ ತುಂಬೆಲ್ಲಾ ಬಿಸಿ ಹರಡಿಸಿ ಬವಳಿಸುತ್ತಾನೆ....... ಸಂಜೆಗೆ ಪುನಃ ಪಡುವ...
Read More